Monday, July 27, 2015

"ಒಂದೈದೇ ನಿಮಿಷ...!" - ಹಾಸ್ಯ ಲೇಖನ.

ಒಂದೈದೇ ನಿಮಿಷ...!

ಈ ಹೆಮ್ಮಕ್ಕಗೊಕ್ಕೆ ಸಮಯದ ಪರಿವೇ ಇರ‍್ತಿಲ್ಲೆ ಹೇಳಿ ಗೆಂಡುಮಕ್ಕಳ ತಲೆಬೆಶಿ....ಜೆಂಭರಕ್ಕೆಲ್ಲಿಗಾದರೂ ಹೋಪಲಿದ್ದರೆ ಅಥವಾ ಮನೇಲಿ ಪೂಜೆ, ಜೆಂಭರ ಇದ್ದತ್ತು ಹೇಳಿಯಾದರೆ, ಈ ಹೆಂಡತಿದೊಂದು ಸೀರೆ ಸುತ್ತಿಯೇ ಆವುತ್ತಿಲ್ಲೆ ಹೇಳಿ ಶೇಖಡ ೯೮ ಗೆಂಡುಮಕ್ಕಳ ತಲೆಬೇನೆ..! ಅಲ್ಲಿ ಪೂಜೆಗೆ, ಹೋಮಕ್ಕೆ ಕೂದ ಭಟ್ರು, "ಆತಾ ಎಲ್ಲಿ ಹೆಂಡತಿಯ ದಿನಿಗೇಳಿ, ಸಂಕಲ್ಪ ಮಾಡ್ಲಾತು, ಧಾರೆಗೆ ಹೊತ್ತಾಯ್ಕೊಂಡು ಬಂತು, ಬೇಗ ಕೂಸಿನ ಕರಕ್ಕೊಂಡು ಬನ್ನಿ, ಹೆಂಡತಿಯ ಕರಕ್ಕೊಂಡು ಬನ್ನಿ" ಹೇಳಿ ಹೇಳಿಯೇ ದೊಂಡೆ ಒಣಗಿ ಹೋಗಿರ‍್ತು ಪಾಪ! ಧಾರೆ ಸಮಯ, ಮುಹೂರ್ತದ ಗಳಿಗೆ ರಜ್ಜ ಮೀರಿರೂ ಪರ್ವಾಗಿಲ್ಲೆ, ಸೀರೆ, ಡ್ರೆಸ್ಸಿಂಗ್ ಸಮ ಆಗದ್ದೇ ಹೆರ ಬಪ್ಪಲೇ ತಯಾರಿರ‍್ತವಿಲ್ಲೆ ಹೆಮ್ಮಕ್ಕೊ ಆಗಲಿ, ಕೂಸುಗಳೇ ಆಗಲಿ! ಏವ ಟೆನ್‍ಷನ್ ಇಲ್ಲದ್ದೇ ನಿಧಾನಕ್ಕೆ ವಸ್ತ್ರ ಸುತ್ತಿಯೋಂಡು, ಸರಿ ಮಾಡಿಯೊಂಡೇ ಇರ‍್ತವು! "ಇದಾ ಭಟ್ಟ ಮಾಮ ದಿನಿಗೇಳ್ತಾ ಇದ್ದವು, ಬೇಗ ಬರೇಕಡ" ಹೇಳಿ ಗೆಂಡ ಬಾಗಿಲ ಬುಡಂದ ಹೆರಂದಲೇ ಹೇಳಿರೆ, ಸೀರೆ ಸುತ್ತಿಯೋಂಡೇ ಪಾಪದ ಭಟ್ರಿಂಗೆ ಧರ್ಮಕ್ಕೇ ನಾಲ್ಕು ಬೈಗುಳ ಈ ಹೆಮ್ಮಕ್ಕಳ ಕೈಯಿಂದ! "ಎಂತ ಹೀಂಗೊಂದು ಅರ್ಜೆಂಟು ಅವರದ್ದು? ಒಟ್ಟಾರೆ ಬೇಗ ಮಂತ್ರ ಹೇಳಿ ಮುಗುಶಿ ಇನ್ನೊಂದಿಕ್ಕೆ ಹೋಯೆಕ್ಕನ್ನೇ, ಸುಮ್ಮಗೆ ಕೂರಿ ಒಂದರಿ... ಈ ಭಟ್ರ ಅರ್ಜೆಂಟು ಎಲ್ಲಾದಿಕ್ಕೆ ಇದ್ದದ್ದೇ...ಭಟ್ರ ಕತೆ ಗೊಂತಿದ್ದೆನಗೆ...ಅಲ್ಲಡಾ, ಇಲ್ಲಿ ಸೀರೆ ಸುತ್ತುಲೆ ಹೇಳಿ ಒಳ ನುಗ್ಗಿದ್ದಷ್ಟೇ, ಅಷ್ಟರಲ್ಲೇ ಆತಾ, ಆತಾ, ಬನ್ನಿ, ಬನ್ನಿ ಹೇಳಿ ಬೊಬ್ಬೆ ಹಾಕುತ್ತವು, ಸೀರೆ ಸುತ್ತಿಯಾದ್ರಲ್ಲದಾ ಹೆರ ಬಪ್ಪದು?!" ಹೇಳಿ! ಆಚ ಹೊಡೆಲಿ ಕಾರ್ಯಕ್ರಮಕ್ಕೆ ಬಂದ ಗುರ‍್ತಿನವರತ್ತರೆ ಹೆಮ್ಮಕ್ಕೊಗೆ ಭಟ್ರ ಬೈಗುಳ, "ಎಲ್ಲಾ ದಿಕ್ಕೆ ಹೀಂಗೇ, ಹೆಮ್ಮಕ್ಕಳದ್ದು ಹೆರಟು ಸಮಯಕ್ಕೆ ಸರಿಯಾಗಿ ಬಪ್ಪದು ಹೇಳಿಯೇ ಇಲ್ಲೆ" ಹೇಳಿ!... ಈಚ ಹೊಡೇಲಿ ಇದರೆಲ್ಲಾ ಕೇಳಿಸಿಯೊಂಡ ಗೆಂಡಂದಿರಿಂಗೆ ಎಂತ ಮಾಡೇಕು ಹೇಳಿಯೇ ಗೊಂತಾವುತ್ತಿಲ್ಲೆ! ಮೋರೆಯ ಹುಳಿ ಹುಳಿ ಮಾಡಿಯೊಂಡು ಭಟ್ರತ್ರೆ ಹೋಗಿ, "ಹೆರಟಾಯ್ಕೊಂಡು ಬಂತು ಅದರದ್ದು, ಒಂದೈದ್ನಿಮಿಷಲ್ಲಿ ಬತ್ತು" ಹೇಳಿ ಸಮಾಧಾನ ಪಡಿಸುದೊಂದೇ ದಾರಿ ಅದು ಸೀರೆ ಸುತ್ತಿ ಮೋರೆಯ ಚೆಂದ ಮಾಡಿ ಬಪ್ಪನ್ನಾರ! ಕೆಲವು ಭಟ್ಟಕ್ಕೊಗೆ ಈ ಹೆಮ್ಮಕ್ಕೊ ಸರಿಯಾದ ಸಮಯಕ್ಕೆ ಹೆರಟು ಬಾರದ್ದರೆ ಮಹಾ ಕೋಪ ಬತ್ತು! "ಡ್ರೆಸ್ ಮತ್ತೆ ಮಾಡಿಯೊಂಡು ಕೂರಲಿಯಪ್ಪಾ, ಇಲ್ಲಿ ಮುಹೂರ್ತ ಮೀರ‍್ತಾ ಇದ್ದು! ಒಂದರಿ ಬೇಗ ಕರಕ್ಕೊಂಡು ಬನ್ನಿ, ಹೀಂಗಾದರೆ ಕಾರ್ಯಕ್ರಮ ಎಷ್ಟೊಂತ್ತಿಂಗೆ ಮುಗಿವದು?! ಮಧ್ಯಾಹ್ನ ಬಾಳೆ ಹಾಕುವಾಗ ಗಂಟೆ ಎರಡಕ್ಕು, ಮತ್ತೆ ಭಟ್ರು ನಿಧಾನ ಮಾಡಿದವು ಹೇಳಿ ಮಾತು ಕೇಳಿಕೊಳ್ಳೇಕು ಎಂಗೊ" ಹೇಳಿ ಬೇಗ ಕರಕ್ಕೊಂಡು ಬನ್ನಿ ಹೇಳಿ ತಾಕೀತು ಮಾಡುತ್ತವು! ಎಂತಾರೂ ಉಭಯ ಸಂಕಟಕ್ಕೆ ಸಿಕ್ಕಿಹಾಕಿಕೊಂಬದು ಈ ಸೀರೆ ಸುತ್ತಿಯೊಂಡು ಅಲಂಕಾರ ಮಾಡಿಕೊಂಡು ತಡ ಮಾಡ್ತಾ ಇಪ್ಪ ಹೆಮ್ಮಕ್ಕಳ ಕೈ ಹಿಡುದ ಗೆಂಡುಮಕ್ಕೊ! ಅಥವಾ ಡ್ರೆಸ್ ಮಾಡಿಕೊಂಡಿಪ್ಪ ಕೂಸಿನ ಅಬ್ಬೆ ಅಪ್ಪ! ಒಂದರಿ ಭಟ್ರ ಹತ್ತರೆ, ಇನ್ನೊಂದರಿ ಸೀರೆ ಸುತ್ತಿಯೋಂಡಿಪ್ಪ ಹೆಮ್ಮಕ್ಕಳ ಬಾಗಿಲ ಬುಡಕ್ಕೊರೆಗೆ ಗೆಂಡಂದಿರದ್ದು ನಾಲ್ಕಾರು ಸಲ ಹೋಗಿ ಬಂದಾಗಿರ‍್ತು ಬೀಟ್ ಪೊಲೀಸಿನವರ ಹಾಂಗೆ, "ಆತಾ... ಆತಾ?" ಕೇಳಿಯೋಂಡು! ಸೀರೆ ಸುತ್ತಿ, ಲಾಯ್ಕಕ್ಕೆ ಹೆರಟು ಬಂದ ಮತ್ತೆ ಅಷ್ಟು ಹೊತ್ತು ತಡವಾತು ತಡವಾತು ಹೇಳಿಯೊಂಡು ಅಂಬರಿಪು ಮಾಡಿಕೊಂಡಿತ್ತ ಭಟ್ರು ಹೆರಟು ಬಂದ ಹೆಮ್ಮಕ್ಕಗೆ ಎಷ್ಟು ಹೊತ್ತು ನಿಂಗೊಗೆಲ್ಲಾ ಸೀರೆ ಸುತ್ತಿ ಬಪ್ಪಲೆ, ತಡವಾಯ್ಕೊಂಡು ಬಂತು ಹೇಳಿ ಒಂದು ಮಾತೂ ಬೈತ್ತವಿಲ್ಲೆ! ನೆಗೆ ಮಾಡಿಯೊಂಡು, "ಬನ್ನಿ.... ಬನ್ನಿ ಅಕ್ಕ, ಮೆಲ್ಲಾಂಗೆ ಆಚ ಹೊಡೆಂಗೆ ಹೋಗಿ, ಗೆಂಡನ ಬಲದ ಹೊಡೆಲಿಪ್ಪ ಆ ಮಣೆಲಿ ಕೂದುಕೊಳ್ಳಿ" ಹೇಳಿಯೊಂಡು ಮಂತ್ರ ಪಠಣವ ಮುಂದುವರ‍್ಸುತ್ತವು! ಇಷ್ಟು ಸಮಾಧಾನಲ್ಲಿ ಭಟ್ರು ಹೇಳಿದ್ದರ ಕೇಳಿದ ಮತ್ತೆ ಹೆಂಡತಿಗೆ ಸಂಶಯ, ಅರ್ಜೆಂಟು ಮಾಡಿದ್ದು ಭಟ್ರೋ ಅಥವಾ ತನ್ನ ಗೆಂಡನಾ ಹೇಳಿ! "ನೋಡಿ ಭಟ್ರು ಎಷ್ಟು ಸಮಾಧಾನಲ್ಲಿದ್ದವು ಹೇಳಿ! ನಿಂಗಳೇ ಅರ್ಜೆಂಟು ಮಾಡುದು" ಹೇಳಿ ಸಣ್ಣಕ್ಕೆ ಗೆಂಡನ ತೊಡಗೋ, ಕೈಗೊ ಚೂಂಟಿದರೂ ಆತು! ಹೆಮ್ಮಕ್ಕೊ ಹೆರಟು ಬಪ್ಪಷ್ಟು ಹೊತ್ತು ಭಟ್ರ, ನೆಂಟರ ಎದುರಂದ ಹಾಂಗೆ ಬಂದ ಮತ್ತೂ ಅದರ ಎದುರಿಂಗೆ ಮುಜುಗರಕ್ಕೆ ಒಳಗಪ್ಪವ್ವು ಗೆಂಡುಮಕ್ಕಳೇ!
ಎಲ್ಲಿಗಾದರೂ ಹೋಪಲಿದ್ದರೆ ಎರಡು ನಿಮಿಷಲ್ಲಿ ಶರ್ಟು, ಪ್ಯಾಂಟ್ ಹಾಕಿಕ್ಕಿ "ಆತಾ ಹೆರಡುವನಾ?" ಹೇಳಿ ಗೆಂಡುಮಕ್ಕೊ ಹೆಂಡತಿ ಹತ್ತರೆ ಕೇಳಿರೆ ಹೆಚ್ಚಾಗಿ ಎಲ್ಲಾ ಹೆಮ್ಮಕ್ಕಳದ್ದೊಂದೇ ಉತ್ತರ, "ಒಂದೈದು ನಿಮಿಷ ಅಪ್ಪಾ, ಆತು ಬತ್ತೆ, ಸೀರೆ ನೆರಿಯೇ ಸರಿ ನಿಂದೊಡಿಲ್ಲೆ. ಸೆರಗುದೇ ಹಾಂಗೆ ಸರಿ ಹಿಡಿವಲೆ ಎಡ್ಕೊಂಡಿಲ್ಲೆ...ಆತಾ ಆತಾ ಹೇಳಿ ಕೇಳಿಯೋಂಡಿಪ್ಪ ಬದಲು ನೆರಿ ಹಿಡುದು ಕೊಡ್ಲಕ್ಕನ್ನೆ? ಅಂತೇ ಕೇಳೀಯೋಂಡಿದ್ದರೆ ಆವುತ್ತಾ ಇಲ್ಲಿ!? ಸುತ್ತಿ ಆಗಿ, ಹೆರಟಾದರೆ ಇಲ್ಲಿಯೇ ಕೂರ‍್ತನಾ, ಹೆರ ಬತ್ತಿಲ್ಲೆಯಾ ಆನು?!, ಒಟ್ಟಾರೆ ಆತಾ ಆತಾ ಹೇಳಿ ಕೇಳುದೊಂದು ನಿಂಗಳ ಕ್ರಮ" ಹೇಳಿ!
"ನಿನ್ನ ನೆರಿಯನ್ನೇ ಆರುದೇ ನೋಡ್ತವಿಲ್ಲೆ ಬಾ, ಹೇಂಗಿದ್ದರೂ ನೀನು ಚೆಂದವೇ" ಹೇಳಿ ಹಾಡಿ ಹೊಗಳಿದರುದೇ ಹೆಮ್ಮಕ್ಕೊ ಅವಕ್ಕೆ ಮನಸ್ಸಿಂಗೆ ಎಲ್ಲಾ ಸರಿ ಆತು ಹೇಳಿ ಕಂಡ ಮತ್ತಷ್ಟೇ ಡ್ರೆಸ್ ಮಾಡಿ ಹೆರ ಬಪ್ಪದು!

ಹೆಮ್ಮಕ್ಕಳ ಐದು ನಿಮಿಷ ಹೇಳಿರೆ ಅರ್ಧ ಗಂಟೆಗೆ ಸಮ ಹೇಳಿ ಗುಟ್ಟು ಗೊಂತಿಪ್ಪ ಕೆಲವು ಗೆಂಡಂದಿರು ಲೆಕ್ಕ ಹಾಕಿಯೇ ಮರುದಿನ ಎಲ್ಲಿಯಾರು ಜೆಂಭರಕ್ಕೊ ಮಣ್ಣೋ ಇಬ್ರೂ ಒಟ್ಟೀಂಗೆ ಹೋಪಲಿದ್ದು ಹೇಳಿಯಾದರೆ, ಮರುದಿನ ಹೆರಡುವ ಸಮಯವ ಹೆಂಡತಿಗೆ ತಿಳುಶುವಾಗ ಅರ್ಧ ಗಂಟೆ ಮೊದಲೇ ಗಡುವು ನೀಡಿರ‍್ತವು!"ಇದಾ ಸರೀ ಟೈಂಗೆ ಅಲ್ಲಿ ಹೋಗಿ ನಾವು ಎತ್ತೇಕಾರೆ ನಾಳೆ ಉದಿಯಪ್ಪಗ ೮.೩೦ ಗಂಟೆಗೇ ಹೆರಟು ರೆಡಿ ಆಯೇಕ್ಕು ನಿನ್ನದು" ಹೇಳಿ! ೯ ಗಂಟೆಗೆ ಹೆರಡೇಕಾದ ಸಮಯ ಆಗಿದ್ದರೆ ೮.೩೦ಗೆ ಸರೀ ಹೆರಟಾಯೇಕ್ಕು ಹೇಳುದು, ಅಂಬಗ ೯ಕ್ಕಾದರೂ ಹೆರಟಾವುತ್ತು ಹೆಂಡತಿದು ಹೇಳಿ ಅವರ ಅಂದಾಜು! ಆದರೂ ಅವರ ಲೆಕ್ಕಾಚಾರ ತಲೆಕೆಳಗಾಗಿರ‍್ತು! ಮನಸ್ಸಿಲಿ ಗ್ರೇಶಿಗೊಂಡ ಆ ’೯’ಗಂಟೆ... ೯.೩೦ ಆಗಿಯೇ ಹೋವುತ್ತು! ಗೆಂಡ ಚಾಪೆ ಕೆಳಂದ ಹೋಗಿ ಐಡಿಯಾ ಹಾಕಿದ್ದರೆ, ಹೆಂಡತಿ ರಂಗೋಲಿ ಅಡಿಯಂದ ಹೋಗಿ ಮಾಸ್ಟರ್ ಪ್ಲಾನ್ ಹಾಕಿರ‍್ತು!  ಕಾಲಜ್ಞಾನಿಗಿಂತ ಚುರುಕಿರ‍್ತು ಗೆಂಡನ ಎಲ್ಲಾ ರೀತಿ ಅಳವದರಲ್ಲಿ!
"ಇನ್ನೂ ಆಯಿದೆಲ್ಲೆಯಾ ಮಾರಾಯ್ತಿ ಹೆರಟು ನಿನ್ನದು?" ಕೇಳಿರೆ, "ಆತಪ್ಪಾ ಒಂದೈದು ನಿಮಿಷಲ್ಲಿ ಹೆರಟಿಕ್ಕಿ ಬತ್ತೆ...ನಿಂಗಳ ಈ ಅರ್ಜೆಂಟಿಲಿ ಮತ್ತೂ ಸರಿಯಾಯ್ಕೊಂಡಿಲ್ಲೆ ಸೀರೆ ಸುತ್ತುದು" ಹೇಳಿ ತಪ್ಪು ಗೆಂಡನ ಮೇಲೇ! "ನಿಂಗೊಗಾದರೆ ಎಂತಾ? ಪ್ಯಾಂಟ್ ಸುರುಕೊಂಡು ಅಂಗಿ ಹಾಕಿರೆ ಮುಗುತ್ತು! ಎಂಗೊಗೆ ಹಾಂಗಾ?!" ಹೇಳಿ ಮತ್ತೊಂದು ಬಾಣದೇ ಬತ್ತು ಹೆಚ್ಚು ಮಾತಾಡಿರೆ!



ಈ ಕತೆ ಜೆಂಭರಗೊಂಕ್ಕೆ ಹೋಪಾಗ ಮಾಂತ್ರ ಆದರೆ ಪರ್ವಾಗಿಲ್ಲೆ. ಆದರೆ ಸಿನೆಮ ನೋಡ್ಲೆ ಹೋಪಾಗ, ಪೇಟೆಗೆ ಸಾಮಾನು ತಪ್ಪಲೆ ಹೋಪಾಗ, ಅಂತೆ ತಿರುಗಾಡುಲೆ ಹೋಪಾಗಲೂ, ವಾಕಿಂಗ್ ಹೋಪಾಗಲೂ ಇದೇ ಕತೆ!...ಹೆಮ್ಮಕ್ಕಗೆ ಹೆರಡುಲೆ ಒಂದು ಗಂಟೆ ಆದರೂ ಬೇಕು ಹೇಳಿ ಗಂಡಸರ ಕಂಪ್ಲೇಂಟು! 
ಒಂದು ನೋಡಿರೆ ಈ ಗೆಂಡು ಮಕ್ಕೊ ಮಂಡೆಬೆಶಿ ಮಾಡಿಕೊಂಬದು ಸುಮ್ಮಗಲ್ಲ! ಹಲವು ಹೆಮ್ಮಕ್ಕೊ ಮಾತಿಂಗೆ ತಪ್ಪುದು ರಜ್ಜ ಹೆಚ್ಚಿಗೇ! ಸೀರೆ ಸುತ್ತುವ ವಿಚಾರಲ್ಲಿ ಮಾಂತ್ರ ಅಲ್ಲ! 
"ಇದಾ ಆನು ಹತ್ರಾಣ ಮನೆ ಅಕ್ಕಂಗೆ ಸಜ್ಜಿಗೆ ಕಾಸಿದ್ದರ ರಜ್ಜ ಕೊಟ್ಟಿಕ್ಕಿ ಬತ್ತೆ, ಅವ್ವು ಪಾಪ ಮಾಡಿಪ್ಪಗ ಮಾಡಿಪ್ಪಗ ಕೊಡ್ತವು" ಹೇಳಿ ಹೇಳಿಕ್ಕಿ ಒಂದು ಕರಡಿಗೆಲಿ ಹಾಕಿ ಹೆರಟು ನಿಂದ ಹೆಂಡತಿ ಹತ್ತರೆ "ಬೇಗ ಬತ್ತೆನ್ನೆ?" ಹೇಳಿ ಗೆಂಡ ಕೇಳಿದ ಹೇಳಿಯಾದರೆ, ಹೆಂಡತಿಯ ಉತ್ತರ, "ಹೋಗಿ ಕೊಟ್ಟಿಕ್ಕಿ ಸೀದಾ ಬಪ್ಪದೇ... ಕೆಲಸ ಬೇಕಾಷ್ಟಿದ್ದು, ಇದಾ ಐದೇ ನಿಮಿಷಲ್ಲಿ ಬತ್ತೆ ಆತಾ?" ಹೇಳಿ ಹೋಗಿರ‍್ತು. ಮತ್ತೆ ವಾಪಸ್ಸು ಬರೇಕಾರೆ ಗೆಂಡ ಫೋನ್ ಮಾಡಿಯೇ ಆಯೆಕ್ಕು ಅಥವಾ ಎಂತ ಅಪ್ಪಾ ಐದು ನಿಮಿಷ ಹೇಳಿ ಹೋದ ಜೆನವ ಇನ್ನುದೇ ಕಾಣ್ತಿಲ್ಲೆನ್ನೇ ಹೇಳಿ ಹುಡುಕಿಯೋಂಡು ಅವರ ಮನೆಯ ಬುಡಕ್ಕೊರೆಗೆ ಬರೇಕ್ಕು! ಹೇಳಿದ ಆ "ಐದು ನಿಮಿಷ" ಒಂದು ಗಂಟೆಂದ ಹೆಚ್ಚಾಗಿರ‍್ತು! "ಐದೇ ನಿಮಿಷಲ್ಲಿ ಬತ್ತೆ ಹೇಳಿ ಹೇಳಿ ಹೋದ ಜೆನ ಹೋಗಿ ಅಲ್ಲೇ ಟೆಂಟ್ ಹಾಕಿದ್ದೆನ್ನೆ?! ಈ ಹೆಮ್ಮಕ್ಕೊ ಏವಾಗ್ಲೂ ಹೀಂಗೇ, ಹೇಳುದೊಂದು ಮಾಡುದೊಂದು!" ಹೇಳಿ ಗೆಂಡ ಹೇಳಿರೆ, ಹೆಂಡತಿದೊಂದೇ ವಾದ, "ಅಲ್ಲಾ ಆನು ಹೇಳಿಪ್ಪೆ ಐದು ನಿಮಿಷಲ್ಲಿ ಬತ್ತೆ ಹೇಳಿ, ಆದರೆ ಅದರರ್ಥ ಐದು ನಿಮಿಷ ಹೇಳಿಯೆಯಾ? ಹಾಂಗೆ ಒಂದೂ ಮಾತಾಡದ್ದೇ ಕರಡಿಗೆಯ ಕೊಟ್ಟಿಕ್ಕಿ ಸೀದಾ ಬಪ್ಪಲೆಡಿತ್ತಾ? ಹೋದಪ್ಪಗ ಒಳ ಬನ್ನಿ ಹೇಳುತ್ತವು, ಕೂರಿ ಹೇಳ್ತವು, ಕೂದ ಮತ್ತೆ ಕಾಫಿ, ತಿಂಡಿ ಕೊಡ್ತವು, ಮತ್ತೆ ಮಕ್ಕಳ, ಮನೆ ವಿಚಾರಂಗೊ ಒಂದೊಂದಾಗಿ ಬತ್ತು...ಮಾತಾಡ್ತಾ ಇಪ್ಪಾಗ ಹೇಂಗಪ್ಪಾ ಎದ್ದಿಕ್ಕಿ ಬಪ್ಪದು...?! ಎಷ್ಟೋ ಸಮಯವೇ ಆತ್ತು ಒಂದಿಕ್ಕಿ ಕೂದು ಆಚ ಮನೆ ಅಕ್ಕನತ್ತರೆ ಮಾತಾಡದ್ದೇ ಗೊಂತಿದ್ದಾ?! ಇಷ್ಟು ಹೊತ್ತು ಆದ್ದರಲ್ಲಿ ಎಂತ ಇದ್ದು? ಏವಾಗ್ಲೂ ಮಾತಾಡ್ತಿಲ್ಲೆನ್ನೆ?! ಈ ಹಾಳು ಮನೆಗೆಲಸ ಯೇವಾಗ್ಲೂ ಇಪ್ಪದೇ...ಇನ್ನು ಶುರು ಮಾಡಿರಾತು ಕೆಲಸಂಗಳ ನಿಧಾನಲ್ಲಿ" ಹೇಳಿ ಸಮಜಾಯಿಶಿಕೆ ಕೊಡ್ತವು! 
ಆದರೆ ಅಲ್ಲಿ ಅಷ್ಟು ಹೊತ್ತು ಕೂದು ಮಾತಾಡಿದ್ದು ಬೇರೆ ಆರಿಂದೋ, ಸಂಬಂಧ ಇಲ್ಲದ್ದ ಲಾಟ್‍ಪೂಟ್ ಶುದ್ದಿಗಳ! ಬೇಕಾದ್ದರ ಜತೆಗೆ ಬೇಡದ್ದರ ಎಲ್ಲಾ ಮಾತಾಡಿ ಮುಗುಶಿಕ್ಕಿ ಕಾಲಹರಣ ಮಾಡಿರ‍್ತವಷ್ಟೇ! ಎಲ್ಲಾ ಮುಗುದ ಮೇಲೆ, "ಸಾಕು ನಿಲ್ಲುಶುವ ಅವರ ಶುದ್ದಿಯ, ಬೇರೆವರ ಶುದ್ದಿ ನವಗೆಂತಕೆ, ಅಲ್ಲದಾ?!, ಮನೆಲಿ ಕೆಲಸ ನೆಗರುತ್ತು, ಎಂತ ಮಾಡಿಯಾಯ್ದಿಲ್ಲೆ" ಹೇಳಿ ಮನೆ ಹೊಡೆಂಗೆ ಮೋರೆ ಮಾಡ್ತವು ಮೆಲ್ಲಂಗೆ.. ಗೇಟಿನತ್ತರೆ ಬಂದ ಮತ್ತೂ ರಜ್ಜ ಹೊತ್ತು ಮಾತಾಡದ್ದರೆ ಸಮಾಧಾನ ಇರ‍್ತಿಲ್ಲೆ!  ಕೆಲವು ಜೆನ ಐದು ನಿಮಿಷಲ್ಲಿ ಮಿಂದು ಬತ್ತೆ ಹೇಳಿ ಮೀವಲೆ ಹೋದರೆ ಮುಕ್ಕಾಲು ಗಂಟೆ ಆದರೂ ಬತ್ತವಿಲ್ಲೆ!

ಒಂದ್ನಿಮಿಷ ನಿಲ್ಲಿ ಹೆಂಡತಿಯಕ್ಕೊಗೆ, ಕೂಸುಗೊಕ್ಕೆ ಬೇಜಾರಪ್ಪದು ಬೇಡ! ಈ ಗೆಂಡು ಮಕ್ಕಳುದೇ, "ಒಂದೈದು ನಿಮಿಷಲ್ಲಿ ಬೇಗ ಬತ್ತೆ" ಹೇಳುತ್ತ ಕ್ರಮ ಇದ್ದಲ್ಲದಾ! ಆಫೀಸಿಂದ ಫೋನು ಮಾಡಿ ಹೇಳಿದ ಆ ’ಐದು ನಿಮಿಷ ಈ ಹೆಮ್ಮಕ್ಕಳ ಡ್ರೆಸ್ ಮಾಡುವ ವಹಿವಾಟಿನ ಹಾಂಗೆ ಐವತ್ತು ನಿಮಿಷವೋ, ಅಥವಾ ಅದಕ್ಕಿಂತಲೂ ಹೆಚ್ಚಾಗಿರ‍್ತು!! ಕಾದು ಕಾದು ಕೂದ ಹೆಮ್ಮಕ್ಕಳ ಅವಸ್ಥೆ ಕೇಳುವ್ವವ್ವು ಆರು?! ನೋಡುವೊ ಎಂತಕಿನ್ನೂ ಬೈಂದವಿಲ್ಲೆಪ್ಪಾ ಹೇಳಿಯೊಂಡು ಮೊಬೈಲಿಂಗೆ ರಿಂಗ್ ಮಾಡಿರೂ ತೆಗೆತ್ತವಿಲ್ಲೆ, ಮೆಸ್ಸೇಜು ಮಾಡಿರೂ ಉತ್ತರ ಇರ‍್ತಿಲ್ಲೆ! ಅವರ ತಲೆಕೊಡಿ ಕಾಂಬನ್ನಾರ ಎಂತಾತಪ್ಪಾ ಇವಕ್ಕೆ ಹೇಳಿ ಎಂತೆಲ್ಲೋ ಕೆಟ್ಟ ಆಲೋಚನೆಗೊ ಕೂಡಾ ತಲೆಲಿ ಸುಳುದು, ಬೇಜಾರಿಲ್ಲಿ ಕಣ್ಣಿರು ಕೂಡಾ ಹಾಕುತ್ತ ಹೆಮ್ಮಕ್ಕೊ ಕೂಡಾ ಇದ್ದವು! ಬಂದ ಮತ್ತೆ "ಎಂತಕೆ ತಡವಾತು? ಐದು ನಿಮಿಷಲ್ಲಿ ಬತ್ತೆ ಹೇಳಿತ್ತಿ ಅನ್ನೇ?" ಹೇಳಿ ಕೇಳಿರೆ, "ಹೇಳಿದ ಟೈಂಲಿ ರಜ್ಜ ಹೆಚ್ಚು ಕಡಮ್ಮೆ ಅಪ್ಪದು ಸಹಜ ಅಪ್ಪಾ! ಎಂತ ಎನಗೆ ಒಂದೇ ಕೆಲಸ ಇಪ್ಪದಾ? ಆಫೀಸಿಂದ ಬತ್ತಾ ಎಲ್ಲಾ ಮುಗುಶಿಯೊಂಡು ಬಂದದು!, ನಿನಗೆಂತ ಬೇರೆ ಕಸುಬಿಲ್ಲೆ, ಏನಾರೂ ಆಲೋಚನೆ ಮಾಡಿಯೊಂಡು ಕೂಪದು!" ಹೇಳಿ ಹೇಳಿಕ್ಕಿ ಹೆಂಡತಿಯ ಬಾಯಿ ಮುಚ್ಚಿಸಿಬಿಡ್ತವು!  ಈ ಹೇಳುವ ಐದು ನಿಮಿಷ ರಜ್ಜ ಹೆಚ್ಚು ಕಡಮ್ಮೆ ಆದರೂ ಎಷ್ಟು ಏರುಪೇರಾವುತ್ತಲ್ಲದಾ?! ಇನ್ನು ಮೇಲೆ ಐದು ನಿಮಿಷ, ಒಂದು ನಿಮಿಷ ಹೇಳುದು ಬಿಟ್ಟು ಸರಿಯಾದ ಸಮಯವನ್ನೇ ಹೇಳಿದರೆ ಹೇಂಗಿಕ್ಕು?!!

ತ್ರಿವೇಣಿ ವಿ ಬೀಡುಬೈಲು
ಮಂಗಳೂರು.






2 comments:

  1. ಹವ್ಯಕನ್ನಡದ ಪರಿಚಯ ಓದುವ ಮಟ್ಟಗೆ ಅಷ್ಟಾಗಿ ಇಲ್ಲದಿದ್ದರೂ, ಪ್ರಯತ್ನದಲ್ಲಿ ಸಫಲನಾದೆ...ಉತ್ತಮ ಬರಹ...ನಗುವಿನೊಂದಿಗೆ ವಿಚಾರಗಳನ್ನು ಸುರುಳಿ ಸುತ್ತಿಸಿಕೊಂಡಿದೆ....ಶುಭಾಶಯಗಳು Arehole Sadashiva Rao

    ReplyDelete
    Replies
    1. ಹವ್ಯಕ ಭಾಷೆ ಕನ್ನಡಕ್ಕೆ ಹತ್ತಿರವಾಗಿದ್ದರೂ ಸುಲಲಿತವಾಗಿ ಓದುವುದು ಅಷ್ಟಾಗಿ ಆ ಭಾಷೆಯನ್ನು ಗೊತ್ತಿಲ್ಲದವರಿಗೆ ಸ್ವಲ್ಪ ಕಷ್ಟವೇ ಸರಿ...ಅಂತಹದರಲ್ಲಿ ತಾವು ಓದಿ ಸಫಲರಾಗಿರುವಿರೆಂದು ಹೇಳಿದ್ದಕ್ಕೆ ತುಂಬಾ ಸಂತೋಷ...ನನ್ನ ಬರವಣಿಗೆಗೆ ತಾವು ಕೊಟ್ಟ ಗೌರವವೆಂದುಕೊಳ್ಳುತ್ತೇನೆ... ನಿಮ್ಮಂತಹವರು ಓದಿದಾಗ ನನಗೆ ಬರೆದ ಸಾರ್ಥಕ ಭಾವನೆ ಉಂಟಾಗುತ್ತದಷ್ಟೇ ಅಲ್ಲದೇ ಪ್ರೋತ್ಸಾಹ ಸಿಕ್ಕಿದಂತದಾಗುತ್ತದೆ. ಅನಂತ ಧನ್ಯವಾದಗಳು ಸರ್...

      Delete